Pragathikaniyoor Staging

ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಕಾಣಿಯೂರು : ಜೂನ್ 1 ಗುರುವಾರದಂದು ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಅದ್ದೂರಿ ಸ್ವಾಗತದೊಂದಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು , ಸಿಬ್ಬಂದಿ ವರ್ಗದವರು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ಬ್ಯಾಂಡ್ ಸೆಟ್ಟಿನೊಂದಿಗೆ ಸಭಾಂಗಣಕ್ಕೆ ಬಂದ ವಿದ್ಯಾರ್ಥಿ ಬಳಗವನ್ನು ಶಿಕ್ಷಕವೃಂದದವರು ಆರತಿ ಎತ್ತಿ ತಿಲಕವನ್ನು ಇಡುವ  ಮೂಲಕ ಈ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು ವಿದ್ಯಾಸರಸ್ವತಿಯ ಅನುಗ್ರಹವನ್ನು ಪಡೆಯುವ ಮೂಲಕ ಎಲ್ಲಾ ಮಕ್ಕಳು ತರಗತಿಗೆ ಹಾಜರಾದರು . ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು ದೀಪ ಬೆಳಗಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶುಭ ಹಾರೈಸಿದರು. ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ, ಪೋಷಕ ಬಂಧು ಸುನಿಲ್ ರೈ ಪೆರುವಾಜೆ , ಧನಂಜಯ ಕೇನಾಜೆ , ಶಿಕ್ಷಕಿ ಹೇಮಾ ನಾಗೇಶ್ ರೈ  ಮಕ್ಕಳಿಗೆ ಶುಭ ಹಾರೈಸಿದರು. ಶ್ರೀಮತಿ ವಿನಯ ವಿ  ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು , ಸಿಬ್ಬಂದಿ ವೃಂದದವರು, ಪೋಷಕ ಬಂಧುಗಳು ಉಪಸ್ಥಿತರಿದ್ದರು.