Pragathikaniyoor Staging

ಸಂಚಾಲಕರ ಮಾತು

ಶ್ರೀ ಜಯಸೂರ್ಯ ರೈ ಮಾದೋಡಿ

ಸಂಚಾಲಕರ ಮಾತು

  • ವೃಕ್ಷವಾಗಿ ಬೆಳೆಯಲು ಅವಶ್ಯವಿರುವ ಶಕ್ತಿ ಮತ್ತು ದ್ರವ್ಯ ಬೀಜದಲ್ಲಿ ಅಡಗಿಕೊಂಡಿದೆ. ಅದರ ವಿಕಾಸಕ್ಕೆ ಅನುವು ದೊರೆಕಿಸಿಕೊಡುವ ಕೃಷಿಕನಂತೆ ಶಿಕ್ಷಕನೂ, ಪ್ರತಿಯೊಬ್ಬನಲ್ಲಿ ಅಡಗಿರುವ ಪರಿಪೂರ್ಣತೆಯ ಅಭಿವ್ಯಕ್ತಿಯೇ ವಿದ್ಯಾಭ್ಯಾಸವೆಂಬ ಸ್ವಾಮೀ ವಿವೇಕಾನಂದರ ನಿರೂಪಣೆಯ ಬೆಳಕಿನ ಅನಾವರಣಕ್ಕಾಗಿ ದುಡಿಯಬೇಕಾಗುತ್ತದೆ.
  • ಒಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಆಧುನಿಕ ಶಿಕ್ಷಣವನ್ನು ನೀಡುವುದರ ಮೂಲಕ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯ ಎಂಬ ನಿಲುವಿನೊಂದಿಗೆ ದುಡಿಯುತ್ತಿದೆ ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ. ಆಡಳಿತ ಮಂಡಳಿಯವರ ಕನಸು ನನಸಾಗಿಸಲು ನಿರಂತರ ಪ್ರಯತ್ನಿಸುವ ಅಧ್ಯಾಪಕ ವೃಂದ, ಸಿಬ್ಬಂದಿವರ್ಗ, ಸದಾ ಸಹಾಯ ಹಸ್ತ ನೀಡುತ್ತಿರುವ ಪೋಷಕರು, ಎಲ್ಲಾ ಸಾಧನೆಗೆ ಕಾರಣರಾದ ವಿದ್ಯಾರ್ಥಿ ವೃಂದದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. 1993-94 ರಿಂದ ಆರಂಭಗೊಂಡು 30 ವರ್ಷಗಳನ್ನು ಪೂರೈಸುತ್ತಿರುವುದರೊಂದಿಗೆ ಪುತ್ತೂರು ತಾಲೂಕಿನ ಕಾಣಿಯೂರಿನ ಸುತ್ತ ಮುತ್ತಲ ಹಲವು ಜನರ ಆಶೋತ್ತರದಂತೆ ಬೆಳೆಯುತ್ತಾ 800ರ ಹತ್ತಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಪುಣ್ಯ ದೇಗುಲವಾಗಿದೆ ಪ್ರಗತಿ ವಿದ್ಯಾಸಂಸ್ಥೆ.
  • ಪ್ರಗತಿ ವಿದ್ಯಾಸಂಸ್ಥೆ ಆರಂಭದ ದಿನದಿಂದಲೂ ಶಿಕ್ಷಣವನ್ನು ಹೊರತುಪಡಿಸಿ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ಬೆಂಬಲ ನೀಡುತ್ತಿದೆ. ಕಳೆದ 30 ವರುಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಾಹಿತ್ಯ, ಸಂಗೀತ, ಕ್ರೀಡೆ ಮುಖ್ಯವಾಗಿ ಯೋಗ, ಚೆಸ್‌, ಕಬಡ್ಡಿ ಇನ್ನಿತರೇ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಯ ಶಿಖರವೇರಿದ್ದನ್ನು ಕಾಣಬಹುದು